12-08-2021 ದಮ್ಮನಕಟ್ಟೆ ಹಾಡಿಯಲ್ಲಿ ಹಾಡಿ ಸಭೆ ಹಾಗೂ ಅರಣ್ಯ ಹಕ್ಕು ಸಮಿತಿ ಸಭೆಯನ್ನು ನಡೆಸಲಾಯಿತು ಸಭೆಯ ಅಧ್ಯಕ್ಷತೆಯನ್ನು ಅಂತರಸಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕಲೀಂ ಪಾಷಾ ರವರು ವಹಿಸಿದ್ದರು ಈ ಸಭೆಗೆ ಮುಖ್ಯಅತಿಥಿಗಳಾಗಿ ಪಂಚಾಯಿತಿ PDO ರವರು ಗ್ರಾಮ ಪಂಚಾಯಿತಿ ಸದಸ್ಯರುಗಳು ಆದಿವಾಸಿ ಮುಖಂಡರಾದ ನಟರಾಜ ರವರು ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು, ಸದಸ್ಯರುಗಳು, ಹಾಡಿಯ ಪುರುಷರು ಮಹಿಳೆಯರು ಸೇರಿದಂತೆ 50 ಮಂದಿ ಭಾಗವಹಿಸಿದ್ದರು ಸಭೆಯಲ್ಲಿ ಚರ್ಚಿಸಿದ ಪ್ರಮುಖ .ವಿಷಯಗಳೆಂದರೆ ಹಾಡಿಯ ಮೂಲಭೂತ ಹಕ್ಕುಗಳ ಬಗ್ಗೆ, ಅರಣ್ಯ ಹಕ್ಕು ಸಮಿತಿ ರಚನೆ ಬಗ್ಗೆ, ಮತ್ತು ಅರ್ಜಿಗಳನ್ನು ಸಲ್ಲಿಸಿರುವ ಬಗ್ಗೆ ಚರ್ಚಿಸಲಾಯಿತು.