ದಿನಾಂಕ ೨೦ ಮತ್ತು ೨೧ ರಂದು ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಆನೆಮಾಳ ಹಾಡಿಯ ಆಶ್ರಮ ಶಾಲೆಯ ಸಭಾಂಗಣದಲ್ಲಿ ನಡೆಸಲಾಯಿತು. ಡಿ.ಬಿ.ಕುಪ್ಪೆ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಸುಮಾರು ೧೧ ಹಾಡಿಗಳ " ಅರಣ್ಯ ಹಕ್ಕು ಹಾಡಿ ಸಮಿತಿ " ಸದಸ್ಯರಿಗೆ ೨೦೦೬ ಅರಣ್ಯ ಹಕ್ಕು ಕಾಯ್ದೆ, ಕಿರು ಅರಣ್ಯ ಸಂಪನ್ಮೂಲಗಳ ಸುಸ್ಥಿರ ಸಂಗ್ರಹಣೆ, ಆದಿವಾಸಿಗಳ ಸುಸ್ಥಿರ ಅಭಿವೃದ್ಧಿ. ಮತ್ತು ಸಂಘಟನೆಯ. ಮಹತ್ವದ ಕುರಿತು ತರಬೇತಿ ನೀಡಲಾಯಿತು.