ದಿನಾಂಕ:12.2.2022 ರಂದು ನಿಸರ್ಗ ಫೌಂಡೇಶನ್ ಕಛೇರಿಯಲ್ಲಿ , ನಿಸರ್ಗ ಫೌಂಡೇಶನ್ ಹಾಗೂ ಬಿಕೆಎಸ್ ಸಂಯುಕ್ತಾಶ್ರಯದಲ್ಲಿ ಗ್ರಾಮ ಸಭೆ ಬಲವರ್ಧನ ಕುರಿತಾದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಈ  ಕಾರ್ಯಾಗಾರಕ್ಕೆ ನಿಸರ್ಗ ಫೌಂಡೇಶನ್  ಸಂಸ್ಥೆಯ ನಿರ್ದೇಶಕರು, ಪಡುಕೋಟೆ ಹಾಗೂ ಅಣ್ಣೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು , ಬಿಕೆಎಸ್ ಪದಾಧಿಕಾರಿಗಳು,  ಗ್ರೀನ್ ಇಂಡಿಯಾ ಫೌಂಡೇಶನ್ ಕಾರ್ಯಕರ್ತರುಗಳು,ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್  ಕಾರ್ಯಕರ್ತರು, 8 ಹಾಡಿಯಿಂದ ಹಾಡಿ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರು ,

ಕಾರ್ಯದರ್ಶಿಗಳು,ಸೇರಿದಂತೆ ಸುಮಾರು 50 ಜನ ಆದಿವಾಸಿ ಮುಖಂಡರುಗಳು, ನಿಸರ್ಗ ಸಂಸ್ಥೆಯ ಕಾರ್ಯಕರ್ತರುಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಗಾರದಲ್ಲಿ ಪ್ರಮುಖವಾಗಿ ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ,ಮೂಲಭೂತ ಸೌಕರ್ಯಗಳ ಬಗ್ಗೆ,A ಫಾರ್ಮ್,ಬಿ ಫಾರ್ಮ್, ಸಿ ಫಾರ್ಮ್ ಸಲ್ಲಿಸುವ ಬಗ್ಗೆ ಹಾಗೂ  ಗ್ರಾಮ ಸಭೆಗಳನ್ನು ಮಾಡಿ ತಮ್ಮ ತಮ್ಮ ಹಾಡಿಯ ಗಡಿರೇಖೆಯನ್ನು    ಪಂಚಾಯಿತಿ ಅಭಿರುದ್ದಿ ಅಧಿಕಾರಿಗಳ ಮೂಲಕ ಗುರುತು ಮಾಡಿಕೊಳ್ಳುವುದು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ  ಆದಿವಾಸಿ ಜನರೇ ತಮ್ಮ ತಮ್ಮ ಹಾಡಿಗಳಲ್ಲಿ  ಗ್ರಾಮ ಸಭೆ ಮಾಡುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.