ದಿನಾಂಕ 16.11.2022 ರಂದು ನಿಸರ್ಗ ಫೌಂಡೇಶನ್ ಚೈಲ್ಡ್ ಲೈನ್-1098 ಸಬ್ ಸೆಂಟರ್ ವತಿಯಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಯರಹಳ್ಳಿ ಗ್ರಾಮದಲ್ಲಿ ಮಕ್ಕಳ ದಿನಾಚರಣೆ ಹಾಗೂ ಮೈತ್ರಿ ಸಪ್ತಾಹ ಅಂಗವಾಗಿ ಮಕ್ಕಳಿಗೆ ಆಟೋಟ ಸ್ಪರ್ಧೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಹೆಚ್.ಡಿ. ಕೋಟೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ರಸುಲ್ಲ ಪಾಗವಾಲೆ, ಅಂಗನವಾಡಿ ಮೇಲ್ವಿಚಾರದ ಗಾಯತ್ರಿ ,ಚೈಲ್ಡ್ ಲೈನ್ ಜಿಲ್ಲಾ ಸಂಯೋಜಕರಾದ ಧನರಾಜ್ ತಾಲ್ಲೂಕು ಸಂಯೋಜಕರಾದ ಚಿಕ್ಕತಿಮ್ಮನಾಯಕ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರುಗಳು ,ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.